
31st July 2025
ಬೆಳಗಾವಿ- ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶನಗರ ಬೆಳಗಾವಿಯಲ್ಲಿ ದಿನಾಂಕ 31ರಂದು ಶ್ರಾವಣ ಮಾಸದ ಫ್ರಯುಕ್ತ ಶ್ರಾವಣ ಸತ್ಸಂಗವನ್ನು ನಡೆಸಲಾಯಿತು. ಬಸವತತ್ವ ಅನುಭಾವಕೇಂದ್ರದ ವಾಗ್ದೇವಿ ತಾಯಿಯವರು ಪೂಜೆ ಎಂದರೆ ತನ್ನನ್ನು ತಾನು ತಿಳಿ ನಡೆನುಡಿಯಲ್ಲಿ ಒಂದಾಗುವುದು.ಡಾಂಬಿಕ ಪೂಜೆಗಿಂತ ಮನಸ್ಸಿನಿಂದ ಮಾಡುವ ಪೂಜೆ ತಲುಪುದು. ಮಂದಿ ಸಲುವಾಗಿ ಮಾಡುವ ಪೂಜೆಯಲ್ಲಿ ನನ್ನನ್ನು ನಾನು ಅರಿತು ಪೂಜೆ ಮಾಡಬೇಕು. ಯಾರೋ ಕೋಪಗಳೊವರೋ ಅವರೇ ಪಾಪಿಷ್ಟರು. ನಿನ್ನನ್ನು ನೀ ವಿಮರ್ಶೆ ಮಾಡಿಕೋ, ಸ್ವಯಂ ಶೋಧಿಸಿಕೊಳ್ಳುವುದೇ ವಚನಗಳನ್ನು ಅರಿವುದೇ ಸುಖ .ಅನುವು ಲಿಂಗ ಚೈತ್ಯನ್ಯ ಯಾವುದು ಚೈತನ್ಯ ಆಹಾರವೆಂದರೆ ಪ್ರಸಾದ ಚರಿತ್ರೆ ಎಂದರೆ ಆತ್ಮ ವಚನ ಸಾಹಿತ್ಯ ಪೂಜೆ ಮಾಡಿಕೊ ಎಂದರೆ ನನ್ನನ್ನು ತಾನು ಅರಿತುಕೊಳ್ಳುವುದು ದುಃಖವನ್ನ ಸರಿಯಾಗಿ ಅರ್ಥ ಮಾಡಿಕೊಂಡರೆ ಎಲ್ಲವೂ ಸರಳವಾಗುವುದು ಬದುಕು ಎಂದರೆ ಕುದಿಯುವ ನೀರು ಇದ್ದ ಹಾಗೆ ದುಗುಡು, ದೂರು, ದಮ್ಮಾನದಿಂದ ದೂರ ಇರಬೇಕು.ಎಂದು ಮಾಮಿ೯ಕವಾಗಿ ತಿಳಿಸಿದರು. ಕುಮುದಿನಿ ತಾಯಿಯವರು ಉಪಸ್ಥಿತರಿದ್ದರು.ಶರಣೆ ಮಹಾದೇವಿ ಅರಳಿ ಸಾಮೂಹಿಕವಾಗಿ ಪ್ರಾಥ೯ನೆ ನಡಿಸಿಕೊಟ್ಟರು.ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು.ಲಿಂಗಾಯತ ಸಂಘಟನೆ ಅವರು ದಾಸೋಹ ಸೇವೆಗೈದರು. ಮಹಾಂತೇಶ ಮೆಣಸಿನಕಾಯಿ,ಶಿವಾನಂದ ನಾಯಕ,ರಾಮಾಪೂರೆ ದಂಪತಿಗಳು,ಶರಣಶರಣೆಯರು ಉಪಸ್ಥಿತರಿದ್ದರು ಸುರೇಶ ನರಗುಂದ ಸ್ವಾಗತಿಸಿದರು ಸುಜಾತಾ ಮತ್ತಿಕಟ್ಟಿ ನಿರೂಪಿಸಿದರು, ಶ್ವೇತಾ ಮುಂಗರವಾಡಿ
ವಂದಿಸಿದರು.
undefined
ಒಳ ಮೀಸಲಾತಿ ಜಾರಿಗೊಳಿಸಲು ಅರೆ ಬೆತ್ತಲೆ ಮೆರವಣಿಗೆ ಮತ್ತು ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಕೇಶ ಮುಂಡನ ಮಾಡಿಸಿಕೊಂಡು ಮಾದಿಗರಿಂದ ಭಾರಿ ಪ್ರತಿಭಟನೆ
ರಾಣಿ ಅಬ್ಬಕ್ಕದೇವಿಯ ಜೊತೆ ಪಯಣ - ಕೃತಿ ಲೋಕಾರ್ಪಣೆ ನಮ್ಮ ಪರಿಸರದ ಜ್ಞಾನ ಪಡೆಯದೆ ವಿದೇಶದವರ ಅಧ್ಯಯನ ಏತಕ್ಕೆ -ಸಿ.ಎ.ಗೋಕುಲದಾಸ ಪೈ